riseofgadag.com

ಕನ್ನಡ ಜನಮನದ ಜೀವನಾಡಿ

ಪ್ರತಿಬಂಧಕಾಜ್ಞೆ ನಡುವೆಯೂ ಪರ-ವಿರೋಧದ ಪ್ರತಿಭಟನೆ

ಲಕ್ಷ್ಮೇಶ್ವರ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶ್ರೀರಾಮಸೇನೆ ವತಿಯಿಂದ ಪಿಎಸ್ ಐ ಈರಪ್ಪ ರಿತ್ತಿ ಅಮಾನತ್ತಿಗಾಗಿ ಆಗ್ರಹಿಸಿ ಪ್ರತಿಬಂಧಕಾಜ್ಞೆ ನಡುವೆಯೂ ಪ್ರತಿಭಟನೆ ನಡೆದಿದ್ದೂ,ಪ್ರತಿಭಟನೆಯಲ್ಲಿ ಪಿಎಸ್ ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲು ಮುಂದಾದ ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನವರ ಸೇರಿ 33 ಜನರನ್ನ ವಶಕ್ಕೆ ಪಡೆದಿದ್ದಾರೆ.

ಈ ಬೆನ್ನಲ್ಲೇ ಲಕ್ಷ್ಮೇಶ್ವರ ಪಟ್ಟಣದ ಕೆಲ ಸ್ಥಳೀಯರು ಪಿಎಸ್ ಐ ವಿರುದ್ಧ ಪ್ರತಿಭಟನೆ ನಡೆಸಿದ ಶ್ರೀರಾಮಸೇನಾ ಮುಖಂಡ ರಾಜು ಖಾನಪ್ಪನವರಿಗೂ ಧಿಕ್ಕಾರ ಅಂತಾ ಘೋಷಣೆ ಕೂಗಿದ್ದಾರೆ.

ಒಟ್ಟಾರೆ ಪ್ರತಿಬಂಧಕಾಜ್ಞೆ ಜಾರಿಯ ನಡುವೆ ಪಿಎಸ್ ಐ ಈರಪ್ಪ‌ ರಿತ್ತಿಯವರ ಕುರಿತು ಪರ ಹಾಗೂ ವಿರೋಧದ ಘೋಷಣೆಗಳು ಕೇಳಿ ಬಂದಿದ್ದು, ಪ್ರತಿಭಟನೆ ಮಾಡಿದವರನ್ನು ಪೊಲೀಸರು ಟೆಂಪೋದಲ್ಲಿ ಕರೆದೊಯ್ದಿದ್ದಾರೆ.

ರೈಸ್ ಆಫ್ ನ್ಯೂಸ್ ಲಕ್ಷ್ಮೇಶ್ವರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 73536 56555