ಗದಗ: ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ ಕಲ್ಯಾಣ ರಥಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗದಗ ಕಾರ್ಮಿಕ ಇಲಾಖೆ ನಿರೀಕ್ಷಕ ಸುಷ್ಮಾ, ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಮಿಕ ಕಲ್ಯಾಣ ರಥವು ಜಿಲ್ಲಾದ್ಯಂತ ಡಿಸೆಂಬರ್ 9 ರಿಂದ 7 ದಿನಗಳ ಕಾಲ ಸಂಚರಿಸಲಿದೆ. ಕಾರ್ಮಿಕ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳು ಹಾಗೂ ಸಂಸ್ಧೆಯ ನೋಂದಣಿ ಹಾಗೂ ಸುಂಕ ಪಾವತಿ ವಿಧಾನ, ಕರ್ನಾಟಕ ರಾಜ್ಯ ಅಸಂಘಟಿದ ಸಮಾಜಿಕ ಭದ್ರತಾ ಮಂಡಳಿಯ ಯೋಜನೆಗಳು, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪಧ್ಧತಿ ನಿಷೇಧ ಬಗ್ಗೆ ಯೋಜನೆಗಳ ಬಗ್ಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ.
More Stories
ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಕೆ ವಿರೋಧಿಸಿ ಪ್ರತಿಭಟನೆ
ಪ್ರತಿಬಂಧಕಾಜ್ಞೆ ನಡುವೆಯೂ ಪರ-ವಿರೋಧದ ಪ್ರತಿಭಟನೆ
ಅಗಸ್ಟ್15 -2024-ರ ಸ್ವತಂತ್ರೋತ್ಸವದ ಅಂಗವಾಗಿ ತಾಲೂಕು ಆಡಳಿತದಿಂದ ಕ್ರಿಕೆಟ್ ಪಂದ್ಯಾವಳಿಗೆ – ತಹಸೀಲ್ದಾರ್ ವಾಸುದೇವ ವ್ಹಿ ಸ್ವಾಮಿ ಚಾಲನೆ