riseofgadag.com

ಕನ್ನಡ ಜನಮನದ ಜೀವನಾಡಿ

ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ:ಬಸವರಾಜ ಬೊಮ್ಮಾಯಿ

ಗದಗ: ಮಾಜಿಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇರುವುದು ವಿಶೇಷ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಪರೂಪದ ರಾಜಕಾರಣಿ, ದೂರದೃಷ್ಟಿ ಉಳ್ಳ ಪ್ರಧಾನಿಯಾಗಿದ್ದರು. ದೇಶವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಿದವರು. ಆರ್ ಬಿಐ ಗೌರ್ನರ್ ಆಗಿ, ವಿಶ್ವಬ್ಯಾಂಕಿನ ಭಾರತದ ಪ್ರತಿನಿಧಿಯಾಗಿ ಭಾರತ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಸಂಪೂರ್ಣ ಜೀವನ ಮೀಸಲಿಟ್ಟಿದ್ದು, ಅದರ ಪರಿಣಾಮ ಭಾರತ ಸಧೃಡ್ಡ ಆರ್ಥಿಕ ಸ್ಥಿತಿಯಲ್ಲಿದೆ. ಜಾಗತೀಕರಣ ಉದಾರೀಕರಣ ಮಾಡಿದ ಫಲವಾಗಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೆಚ್ಚಿಗೆ ಹರಿದು ಬಂದಿದೆ. ಆರ್ಥಿಕ ಶಿಸ್ತು ಹೊಂದುವಂತಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರವಾದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇರುವುದು ವಿಶೇಷ. ನಾವು ಯಾವಾಗಲೂ ಭೇಟಿ ಆದಾಗ ಹುಬ್ಬಳಿಯ ಬಗ್ಗೆ ಕೇಳುತ್ತಿದ್ದರು. ಬಹಳ ಕಾಳಜಿ ವಹಿಸುತ್ತಿದ್ದರು.
ಬೆಂಗಳೂರಿನ ಅಭಿವೃದ್ಧಿಯ ಬಗ್ಗೆಯೂ ಮನಮೋಹನ್ ಸಿಂಗ್ ಅವರಿಗೆ ವಿಶೇಷ ಕಾಳಜಿ ಇತ್ತು. ಬೆಂಗಳೂರು ಮೆಟ್ರೋ ಯೋಜನೆಗೆ ಸುಮಾರು 5 ಸಾವಿರ ಕೋಟಿ ರೂ. ನೀಡಿರುವುದನ್ನು ಸ್ಮರಿಸುತ್ತೇನೆ. ಸಮಗ್ರ ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಬಹಳ ಇದೆ. ಅವರ ಮಾರ್ಗದರ್ಶನ ಬಹಳ ಅವಶ್ಯವಿತ್ತು. ಅವರ ಅಗಲಿಕೆಯಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ತಿಳಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 73536 56555