ಲಕ್ಷ್ಮೇಶ್ವರ : ಅಗಸ್ಟ್ 15 2024ರ ಸ್ವತಂತ್ರೋತ್ಸವದ ಅಂಗವಾಗಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾವಳಿಗೆ ಪಟ್ಟಣದ ಪುರಸಭೆಯ ಉಮಾ ವಿದ್ಯಾಲಯ ಮೈದಾನದಲ್ಲಿ ತಹಸಿಲ್ದಾರ್ ವಾಸುದೇವ. ವ್ಹಿ. ಸ್ವಾಮಿ, ಯವರು ರಿಬ್ಬನ್ ಕಟ್ ಮಾಡುವ ಮುಖಾಂತರ ಚಾಲನೆ ನೀಡಿದರು
ಈ ವೇಳೆ ಮಾತನಾಡಿದ ಆವರು ಈ ಸಾರಿ ನಡೆಯುವ ಆಗಸ್ಟ್ 15ರ ಸ್ವತಂತ್ರೋತ್ಸವದ ಅಂಗವಾಗಿ ಏನಾದರೂ ವಿಶೇಷತೆಯನ್ನು ನಡೆಸಬೇಕು ಎಂಬ ಉದ್ದೇಶದಿಂದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಚರ್ಚಿಸಿದಾಗ
ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವುದು ಉತ್ತಮ ವಿಚಾರ ಎಂಬುದನ್ನು ತೀರ್ಮಾನಿಸಿ
ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಇದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹ ತಮ್ಮ ಕೆಲಸ ಕಾರ್ಯಗಳ ಒತ್ತಡದ ಮಧ್ಯದಲ್ಲಿ ಮನರಂಜನೆಯನ್ನು ಪಡೆಯಬಹುದು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರವಾಗಿ ಒಬ್ಬರನ್ನೊಬ್ಬರು ಕೂಡುವ ಮತ್ತು ನೋಡುವ ಅವಕಾಶ ಕಲ್ಪಿಸುವಲು ಈ ಒಂದು ಕ್ರಿಕೆಟ್ ಪಂದ್ಯಾವಳಿ ಅನುಕೂಲ ಕಲ್ಪಿಸುತ್ತದೆ ಎಂಬ ಉದ್ದೇಶದಿಂದ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದ ಎಲ್ಲರಿಗೂ ಖುಷಿ ತಂದಿದೆ ಎಂದರು
ಪಂದ್ಯಾವಳಿಯಲ್ಲಿ ವಿವಿಧ ಇಲಾಖೆಯ ಒಟ್ಟು 10 ತಂಡಗಳನ್ನಾಗಿ ವಿಂಗಡಿಸಲಾಗಿದ್ದು ಶುಕ್ರವಾರ ಮೊದಲನೆಯ ದಿನದ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭಗೊಂಡವು
ಈ ಸಮಯದಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಸಿಪಿಐ ನಾಗರಾಜ್ ಮಾಡಳ್ಳಿ, ಪುರಸಭೆಯ ಮುಖ್ಯ ಅಧಿಕಾರಿ ಮಹೇಶ್ ಹಡಪದ, ಪಿಎಸ್ಐ ಈರಪ್ಪ ರಿತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಮುಖಾಂತರ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು
More Stories
ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಕೆ ವಿರೋಧಿಸಿ ಪ್ರತಿಭಟನೆ
ಕಾರ್ಮಿಕ ಕಲ್ಯಾಣ ರಥಕ್ಕೆ ಡಿಸಿ ಗೋವಿಂದರೆಡ್ಡಿ, ಸಿಇಒ ಭರತ್ ಚಾಲನೆ
ಪ್ರತಿಬಂಧಕಾಜ್ಞೆ ನಡುವೆಯೂ ಪರ-ವಿರೋಧದ ಪ್ರತಿಭಟನೆ