ಗಂಗಾವತಿ: ಸರ್ ಎಂ ವಿಶ್ವೇಶ್ವರಯ್ಯ ಎಜುಕೇಶನ್ ಟ್ರಸ್ಟ್ ಲಿಟಲ್ ಆರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ನೇಹಿತರ ದಿನಾಚರಣೆ ಮಾಡಲಾಯಿತು.
ಸ್ನೇಹ ಎಂಬುದು ಅತ್ಯಂತ ಸುಂದರ ಸಂಬಂಧ. ಜುಲೈ 30ರಂದು ಇಂಟರ್ ನ್ಯಾಷನಲ್ ಫ್ರೆಂಡ್‌ಶಿಪ್ ಡೇ ಆಚರಿಸಿಕೊಂಡು ಬರಲಾಗುತ್ತದೆ. ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಸ್ನೇಹಿತರಿಗೆ ಕಳುಹಿಸುವ ಶುಭಾಶಯದ ಸಂದೇಶಗಳು ಇಲ್ಲಿವೆ ಸ್ನೇಹ… ಈ ಪದದಲ್ಲೇ ಒಂದು ಸೆಳೆತವಿದೆ. ಸ್ನೇಹ ಎಂಬುದೇ ಒಂದು ಮಧುರ ಬಾಂಧವ್ಯ. ಮಾತಾ, ಪಿತ, ಗುರು, ದೈವ ಎಂಬ ನಾಲ್ಕು ಅಂಶಗಳು ಪ್ರತಿಯೊಬ್ಬರ ಬಾಳಿನಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿವೆಯೋ ಸ್ನೇಹಕ್ಕೂ ಅಷ್ಟೇ ಮಹತ್ವ ಇದೆ. ಸ್ನೇಹವನ್ನು ಬಯಸದೇ ಇರುವ ಜೀವರಾಶಿಯನ್ನು ಈ ಲೋಕದಲ್ಲಿ ಕಾಣಲು ಸಾಧ್ಯವೇ ಇಲ್ಲ. ಯಾಕೆಂದರೆ, ಸ್ನೇಹ ಎಂಬುದೊಂದು ಅನನ್ಯ ಶಕ್ತಿ. ಮನಸ್ಸು ತುಂಬಿದ ಸ್ನೇಹಿತರು ಜೊತೆಯಲ್ಲಿ ಇದ್ದಾರೆ ಎಂದರೆ ಆ ಖುಷಿ, ಸಡಗರವೇ ಬೇರೆ ಕಷ್ಟದಲ್ಲಿ ಜೊತೆಯಾಗಿರುವವರು, ಬಿದ್ದಾಗ ಎದ್ದು ನಿಲ್ಲಿಸಿ ಹೆಗಲು ಕೊಡುವವರು, ಸೋತಾಗ ಗೆಲುವಿಗೆ ಪ್ರೋತ್ಸಾಹ ತುಂಬುವವರು, ಖುಷಿಯಲ್ಲಿ ಪಕ್ಕದಲ್ಲೇ ನಿಂತು ಸಂಭ್ರಮಿಸುವವರು ನಿಜವಾದ ಸ್ನೇಹಿತರು. ಸುಂದರ ಸ್ನೇಹದಲ್ಲಿ ಸ್ವಾರ್ಥ ಇರುವುದಿಲ್ಲ. ಅದು ದೇವರಷ್ಟೇ ಪವಿತ್ರ, ಆಕಾಶದಷ್ಟೇ ಎತ್ತರ. ಇಂತಹ ಸುಂದರ ಸ್ನೇಹವನ್ನು ಪದಗಳಲ್ಲಿ ಬಣ್ಣಿಸುವುದೂ ಇಡೀ ಸಮುದ್ರವನ್ನೇ ಬೊಗಸೆಯಲ್ಲಿ ಹಿಡಿಯುತ್ತೇನೆ ಎನ್ನುವುದೂ ಒಂದೇ. ಯಾಕೆಂದರೆ, ಅದೊಂದು ಪದಗಳಿಗೂ ನಿಲುಕದ ಅದ್ಭುತ ಅನುಭವ. ಮನುಷ್ಯ, ಪಶು ಪಕ್ಷಿ, ತರು ಲತೆಯಲ್ಲೂ ನಾವು ಇಂತಹ ಸ್ನೇಹವನ್ನು ಕಾಣಬಹುದು ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಿಯಾ ಕುಮಾರಿ ಮತ್ತು ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಮಕ್ಕಳಿಗೆ ಸ್ನೇಹದ ಬಗ್ಗೆ ವಿವರಣೆ ನೀಡಿದರು.
More Stories
ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ: ಎರಡು ದಿನ ಶಾಲೆಗಳು ರಜೆ
ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಕೆ ವಿರೋಧಿಸಿ ಪ್ರತಿಭಟನೆ
ಕಾರ್ಮಿಕ ಕಲ್ಯಾಣ ರಥಕ್ಕೆ ಡಿಸಿ ಗೋವಿಂದರೆಡ್ಡಿ, ಸಿಇಒ ಭರತ್ ಚಾಲನೆ