ಗದಗ: ನೀರಿನ ಟ್ಯಾಂಕರ್ ಚಕ್ರ ತಲೆ ಮೇಲೆ ಹರಿದು ೨ ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ಗುರುವಾರ ಸಂಭವಿಸಿದೆ.
ಹೀದಾ ಸೊರಟೂರು (೨) ಮಗು ಮೃತ ದುರ್ದೈವಿಯಾಗಿದ್ದಾಳೆ. ಪೋಷಕರೊಂದಿಗೆ ಸ್ಕೂಟಿ ಮೇಲೆ ಹೋಗುತ್ತಿರುವಾಗ ಎದುರಿಗೆ ನೀರಿನ ಟ್ಯಾಂಕರ್ ಬಂದಿತೆAದು ಸ್ಕೂಟಿ ನಿಲ್ಲಿಸಿದ್ದಾರೆ. ಆಗ ಮಗು ಸ್ಕೂಟಿಯಿಂದ ಕೆಳಕ್ಕೆ ಬಿದ್ದ ಮಗುವಿನ ತಲೆ ಮೇಲೆ ನೀರಿನ ಟ್ಯಾಂಕರ್‌ನ ಹಿಂದಿನ ಚಕ್ರ ಹರಿದುಹೋಗಿದ್ದರಿಂದ ತಲೆ ಒಡೆದು ಮೆದುಳು ಛಿದ್ರಗೊಂಡು ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ. ಮಗುವಿನ ಸಾವಿಗೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಘಟನಾ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ಮೈಜುಮ್ಮೆನ್ನುವಂತಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಗದಗ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
More Stories
ಜಿಪಂ ಎಸ್ಡಿಎ ಲಕ್ಷ್ಮಣ ಕರ್ಣೆ ಮನೆ ಮೇಲೆ ಲೋಕಾ ದಾಳಿ
ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ