riseofgadag.com

ಕನ್ನಡ ಜನಮನದ ಜೀವನಾಡಿ

ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

ಹಾವೇರಿ: ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಎರಡು ಕಾರುಗಳ ಮಧ್ಯೆ ಭೀಕರ ರೆಸ್ತ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ ಬಳಿ ಬುಧವಾರ ನಡೆದಿದೆ. ಚಂದ್ರಮ್ಮ(೫೯), ಮೀನಾ(೩೮), ಮಹೇಶಕುಮಾರ, ಧನ್ವೀರ್ ಮೃತರು.

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪೮ರ ತಡಸ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರು ಹುಬ್ಬಳ್ಳಿಯ ಕಿಮ್ಸ್? ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಂದ್ರಮ್ಮ ವಯಸ್ಸು ೫೯ ವರ್ಷ, ಚಾಮರಾಜಪೇಟೆ, ಬೆಂಗಳೂರು, ಮೀನಾ ವಯಸ್ಸು ೩೮ ವರ್ಷ, (ಚಂದ್ರಮ್ಮನ ಮಗಳು) ಹರಿಹರ, ಮಹೇಶ್ ಕುಮಾರ್ ಸಿ ,(ಚಾಲಕ ಕಮ್ ಮಾಲೀಕ) ವಯಸ್ಸು ೪೧ ಸಾ-ಹರಿಹರ ದಾವಣಗೆರೆ ಜಿಲ್ಲೆ. ಧನವೀರ ,ವಯಸ್ಸು ೧೧ ವರ್ಷ,-ಹರಿಹರ ಎಂದು ತಿಳಿದುಬಂದಿದೆ.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 73536 56555