ಗದಗ: ಆದಾಯ ಮೀರಿ ಆಸ್ತಿ ಆರೋಪದ ಹಿನ್ನಲೆಯಲ್ಲಿ ಗದಗ ಜಿಲ್ಲಾ ಪಂಚಾಯಿತಿ ಎಸ್ ಡಿಎ ಲಕ್ಷ್ಮಣ್ ಕರ್ಣಿ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ನಗರದ ಆರ್ ಕೆ ಬಡಾವಣೆಯ ಮನೆ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ಮಾಡಲಾಗಿದ್ದು, ಗದಗ, ಗಜೇಂದ್ರಗಡ, ಹಾವೇರಿಯಲ್ಲಿ ಕರ್ಣಿಗೆ ಸಂಬಂಧಿಸಿದ ಮನೆ, ಆಸ್ತಿ ಪರಿಶೀಲನೆ ನಡೆಸಿದ್ದಾರೆ.
ಆದಯ ಮೀರಿ ಆಸ್ತಿ ದೂರಿನ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಹನುಮಂತ ರೈ, ಡಿಎಸ್ ಪಿ ವಿಜಯ ಬಿರಾದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪಿಎಸ್ ಐ ಎಸ್ ಎಸ್ ತೇಲಿ, ಪಿಜಿ ಕಟಗಿ ತಂಡದಿಂದ ಕಡತ ಪರಿಶೀಲನೆ ಮುಂದುವರಿದಿದೆ.
More Stories
ನೀರಿನ ಟ್ಯಾಂಕರ್ ಚಕ್ರ ತಲೆ ಮೇಲೆ ಹರಿದು ೨ ವರ್ಷದ ಮಗು ಸಾವು
ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ