riseofgadag.com

ಕನ್ನಡ ಜನಮನದ ಜೀವನಾಡಿ

ಸುದ್ದಿಗೋಷ್ಠಿಯಲ್ಲಿ ಘಟನೆ ನೆನಪಿಸಿಕೊಂಡು ಮತ್ತೆ ಕಣ್ಣೀರಿಟ್ಟ ಲಕ್ಷಿö್ಮ ಹಬ್ಬಾಳಕರ

ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಆ ಪದ ಬಳಕೆ ಕೇಳಿ ನನಗೆ ತೀರಾ ಶಾಕ್ ಆಯ್ತು ಎಂದು ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿರು.
ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ತುರ್ತು ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ ಟಿ ಅವರು ಅಧಿವೇಶನದಲ್ಲಿ ವಾಕ್ಸಮರ ನಡೆಯುವ ವೇಳೆ ಆ ಪದ ಬಳಕೆ ಮಾಇದರು. ಅದನ್ನು ಹೇಳಲು ಸಹ ನನಗೆ ಅಸಹ್ಯ ಅನಿಸುತ್ತೆ. ಆ ಮಾತು ಕೇಳಿ ನನಗೆ ಶಾಕ್ ಆಗಿದೆ, ನೋವಾಗಿದೆ ಎಂದು ನೊಂದುಕೊAಡರು.

ಅಧಿವೇಶನದಲ್ಲಿ ಧರಣಿ ಮಾಡಿ ಮುಗಿಸಿ ಕುಳಿತುಕೊಂಡಿದ್ದೆವು. ನಾನು ನನ್ನ ಜಾಗದಲ್ಲಿ ಕುಳಿತುಕೊಂಡಿದ್ದೆ, ಸಿ ಟಿ ರವಿ ಅವರು ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಜರಿದರು. ನಾನು ಮೊದಲಿಗೆ ಕೇಳಿಸಿಕೊಂಡು ಸುಮ್ಮನಿದ್ದೆ. ಮತ್ತೆ ಅದೇ ರೀತಿ ರಾಹುಲ್ ಗಾಂಧಿ ಅವರನ್ನು ನಿಂದಿಸಿದರು. ಆಗ ನಾನು ತಿರುಗಿ ಪ್ರಶ್ನೆ ಮಾಡಿದೆ. ನೀವು ಕೊಲೆಗಾರರು ಎಂದೆ ಉತ್ತರ ಕೊಟ್ಟೆ. ಆಗ ಸಿ ಟಿ ವಿ ಅವರು ಆ ಪದ ಬಳಕೆ ಮಾಡಿ ನನ್ನನ್ನು ನಿಂದಿಸಿದರು ಎಂದರು.

ರಾಜಕೀಯದಲ್ಲಿ ಕಷ್ಟಪಟ್ಟು ಮುಂದೆ ಬಂದಿದ್ದೇನೆ. ಆದರೆ, ನನಗೆ ಆ ಪದ ಬಳಸಿ ತೇಜೋವಧೆ ಮಾಡಿದ್ದಾರೆ. ನನಗೆ ಬಹಳ ದುಃಖವಾಗಿದೆ. ನನ್ನ ಸೊಸೆ ಆಸ್ಪತ್ರೆಯಲ್ಲಿದ್ದು, ಅಮ್ಮ ನೀನು ವಾರಿಯರ್ ನಿಮ್ಮ ಜತೆ ನಾವೆಲ್ಲಾ ಇದ್ದೇವೆ ಎಂದು ಹೇಳಿದ್ದಾಳೆ. ನನ್ನ ಮಗ ಬೆಂಗಳೂರಿನಲ್ಲಿ ಇದ್ದು ನಿನ್ನ ಬೆನ್ನಿಗೆ ನಾವೆಲ್ಲ ಇದ್ದೇವೆ ಎಂದು ಹೇಳಿದ್ದಾನೆ. ಕ್ಷೇತ್ರದ ಜನ ನಮ್ಮ ಜತೆ ಇದ್ದಾರೆ ಎಂದು ಹೆಬ್ಬಾಳ್ಕರ ಹೇಳಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 73536 56555