ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ ಹಾಗೂ ಸಿಟಿ ರವಿ ನಡುವಣ ಜಟಾಪಟಿ ವಿಕೋಪಕ್ಕೆ ತಿರುಗಿದೆ.
ತಮ್ಮ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಸಿಟಿ ರವಿ ಬಂಧಿಸಿಡಲಾಗಿತ್ತು. ಠಾಣೆ ಮುಂದೆ ಬಿಜೆಪಿ ಎಂಎಲ್ಸಿ ರವಿಕುಮಾರ, ಸುಭಾಸ ಪಾಟೀಲ, ಸಂಜಯ ಪಾಟೀಲ ಸೇರಿದಂತೆ ಮತ್ತಿತರು ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ. ಖಾನಾಪುರ ಠಾಣೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಕಾನೂನು ಸುವ್ಯವಸ್ಥೆ ಕಾರಣ ಪೊಲೀಸರು ಸಿಟಿ ರವಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಮುಂದಾದರು. ಈ ವೇಳೆಯೂ ಭಾರಿ ಹೈಡ್ರಾಮವೇ ನಡೆಯಿತು. ಬಿಜೆಪಿ ನಾಯಕರು ಏಕಾಏಕಿ ಮುಗಿಬಿದ್ದರು. ಇದರಿಂದ ಭಾರಿ ತಳ್ಳಾಟ, ನೂಕಾಟವೇ ನಡೆಯಿತು. ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಿದ ಸಿಟಿ ರವಿ ನನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
More Stories
ಸಿಟಿ ರವಿ ವಿರುದ್ಧ ಕಾನೂನು ಹೋರಾಟ: ಲಕ್ಷ್ಮಿ ಹೆಬ್ಬಾಳಕರ
ಕಾಂಗ್ರೆಸ್ ಆರೋಪ ಸುಳ್ಳು: ಆತ್ಮಸಾಕ್ಷಿ ವಿರುದ್ಧ ನಡೆದುಕೊಂಡಿಲ್ಲ: ಸಿ ಟಿ ರವಿ
ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ಅಮಿತ್ ಶಾ ವಿರುದ್ಧ ಪ್ರತಿಭಟನೆ