riseofgadag.com

ಕನ್ನಡ ಜನಮನದ ಜೀವನಾಡಿ

ಗಂಗಿಮಡಿ ಬಳಿ ನಿರ್ಮಿಸಿರುವ ಗುಂಪು ಮನೆಗಳಲ್ಲಿ ಅನೈತಿಕ ಚಟುವಟಿಕೆ…!

ಗದಗ: ನಗರದ ಗಂಗಿಮಡಿ ಪ್ರದೇಶದ ಬಳಿ ಕೋಟ್ಯಂತರ ರೂಪಾಯಿ ಖರ್ಚುಮಾಡಿ ನಿರ್ಮಿಸಿರುವ ಆಶ್ರಯ ಮನೆಗಳು ಇದೀಗ ಕುಡುಕರ ಅಡ್ಡೆಗಳಾಗಿ ಅನೈತಿಕ ತಾಣಗಳಾಗಿ ಪರಿಣಮಿಸಿ ಪಾಳು ಬೀಳತೊಡಗಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ಅನುದಾನದಲ್ಲಿ ನಿರ್ಮಿಸಿರುವ ಗುಂಪು ಮನೆಗಳ ಹಂಚಿಕೆಯಲ್ಲಿ ಗೋಲ್ಮಾಲ್ ಮಾಡಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರಲ್ಲದೇ, ಕಾಂಗ್ರೆಸ್ ಕಾರ್ಯಕರ್ತರು ಉಳ್ಳವರಿಗೆ ಮನೆ ನೀಡಿದ್ದಾರೆ ಎಂದಬ ಆರೋಪಗಳು ಸಹ ಕೇಳಿ ಬರುತ್ತಿವೆ.
ಸ್ಲಂ ನಿವಾಸಿಗಳು, ವಸತಿ ರಹಿತ ಕುಟುಂಬಗಳು ೨೦೧೪ರಿಂದಲೂ ಪ್ರತಿಭಟನೆ ಮಾಡುತ್ತಿದ್ದರೂ ಮನೆಗಳನ್ನು ನೀಡಿಲ್ಲ. ಗದಗ ಬೆಟಗೇರಿಯಲ್ಲಿರುವ ೩೪೮ ವಸತಿ ರಹಿತ ಕುಟುಂಬಗಳಿಗೆ ಮನೆ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಂಗಿಮಡಿ ಬಳಿ ನಿರ್ಮಾಣ ಆಗುತ್ತಿರುವ ೧೦೦೮ ಗುಂಪು ಮನೆಗಳಲ್ಲಿಯೇ ೩೪೮ ಬಡ ಕುಟುಂಬಗಳಿಗೆ ಮನೆಗಳನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಎರಡು ತಿಂಗಳೊಳಗೆ ಮನೆಗಳನ್ನು ನೀಡದಿದ್ದರೆ ಅಮರಣ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 73536 56555