riseofgadag.com

ಕನ್ನಡ ಜನಮನದ ಜೀವನಾಡಿ

೨ಎ ಮೀಸಲಾತಿಗಾಗಿ ಡಿ ೧೦ರಂದು ಸುವರ್ಣಸೌಧಕ್ಕೆ ಮುತ್ತಿಗೆ: ಶಾಸಕ ಸಿ ಸಿ ಪಾಟೀಲ

 

ದಗ: ೨ಎ ಮೀಸಲಾತಿಗಾಗಿ ಡಿಸೆಂಬರ್ ೧೦ರಂದು ನಾಲ್ಕು ಸಾವಿರ ವಕೀಲರು ಸಮವಸ್ತ್ರ ಸಹಿತ ಅವರ ನೇತೃತ್ವದಲ್ಲಿ ೫೦ ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ಹೋರಾಟ ಗದಗ ಜಿಲ್ಲೆಯಿಂದ ೧೦ ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೀಸಲಾತಿಗಾಗಿ ೭೦೦ ಕಿ.ಮೀ ಪಾದಯಾತ್ರೆ ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ಸಮಾವೇಶ ಮಾಡಲಾಯ್ತು. ಸಮಾಜ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಅಂದು ನಾನು ಕೆಲಸ ಮಾಡಿದ್ದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿ ಮೀಸಲಾತಿ ಶಿಫಾರಸ್ಸು ಮಾಡಿದರು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ಸಮಾಜದ ಕೂಗಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಡಿಸೆಂಬರ್ ೧೦ರಂದು ಟ್ರಾö್ಯಕ್ಟರ್ ಮೂಲಕ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದರು.

ಹೋರಾಟಕ್ಕೆ ಸಚಿವರ ಬೆಂಬಲ

ಸರ್ಕಾರದ ಕೆಲ ಸಚಿವರು ಶಾಸಕರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಯಾವ ಸಚಿವರು ಎಂಬ ಚರ್ಚೆ ಅನಗತ್ಯ. ಅವರು ಹೆಸರನ್ನು ಸಹ ಪ್ರಸ್ತಾಪ ಮಾಡಲ್ಲ. ಹೋರಾಟದಲ್ಲಿ ರಾಜಕಾರಣ ಇಲ್ಲ. ಎಲ್ಲಾ ಪಕ್ಷದ ಪಂಚಮಸಾಲಿ ಮುಖಂಡರೂ ಹೋರಾಟದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.
ಸಮಾಜದ ಬಡ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ಮಾಡುತ್ತಿದ್ದು, ಕೃಷಿಯನ್ನು ನಂಬಿ ಬದುಕುತ್ತಿರುವ ಪಂಚಮಸಾಲಿ ಸಮಾಜದ ವಿದ್ಯಾವಂತರು ನೌಕರಿ ಪಡಿಯಬಾರದೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಹೋರಾಟ ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನ ದುರುಪಯೋಗ ಬಳಸಿಕೊಳ್ಳುತ್ತಿದೆ. ಹೋರಾಟವನ್ನು ತಡೆಯಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಸಮಾಜದ ಗಮನಕ್ಕೆ ಬಂದಿದೆ. ನಾವು ಶಾಂತಿಯುತ ಹೋರಾಟ ಮಾಡುತ್ತೇವೆ. ಈ ಸಂಗತಿಯನ್ನು ಇಂಟೆಲಿಜೆನ್ಸಿ ಅವರು ಸಿಎಂ ಗಮನಕ್ಕೆ ತರಬೇಕು. ಹೋರಾಟ ತಡೆಯಲು ಪ್ರಯತ್ನ ಮಾಡಬಾರದು, ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು ಅವಕಾಶ ನೀಡಬೇಕು ಎಂದು ಅವರು ಸಿಎಂ ಅವರಿಗೆ ಮನವಿ ಮಾಡಿದರು.
ಮೀಸಲಾತಿ ವಿಚಾರದಲ್ಲಿ ಸರ್ಕಾರ ಸುಮ್ಮನೇ ಕಾಲಹರಣ ಮಾಡುತ್ತಿದೆ. ಹೋರಾಟ ಹತ್ತಿಕ್ಕೋದು ಕೈಬಿಟ್ಟು ಹೋರಾಟಕ್ಕೆ ಬೆಂಬಲ ಕೊಡಬೇಕು. ಯಾವುದೇ ಕಾರಣಕ್ಕೂ ಮುತ್ತಿಗೆ ಕಾರ್ಯಕ್ರಮ ನಿಲ್ಲೋದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ನಾನು, ಎ ಬಿ ಪಾಟೀಲ, ಶಾಸಕರಾದ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಭಾಗವಹಿಸುತ್ತೇವೆ ಎಂದರು.
ಮೀಸಲಾತಿ ಹೋರಾಟದಿಂದ ಶಾಸಕ ವಿಜಯಾನಂದ ಕಾಶಪ್ಪನವರ ಅಂತರ ಕಾಯ್ದುಕೊಂಡಿರುವ ವಿಚಾರಕ್ಕೆ ಸಂಬAಧಿಸಿದAತೆ ಮಾತನಾಡಿದ ಸಿ ಸಿ ಪಾಟೀಲ, ಈ ಹಿಂದೆ ಕೂಡಲಸಂಗಮ ಶ್ರೀಗಳು ವಿಜಯಾನಂದ ಕಾಶಪ್ಪನವರ ಕೈಬೊಂಬೆ ಎಂದು ಆರೋಪಿಸುತ್ತಿದ್ದು. ಇದೀಗ ಬಸವಗೌಡ ಪಾಟೀಲ ಯತ್ನಾಳ ಕೈಬೊಂಬೆ ಅಂತಾರೆ. ಇದರಲ್ಲಿ ಕೈಬೊಂಬೆ ಆಗೋದು ಏನಿದೆ.
ಸ್ವಾಮೀಜಿ ಅವರದು ಏನೂ ಆಸ್ತಿ ಇಲ್ಲ, ಎಲ್ಲರ ಮನೆಯಲ್ಲಿ ಊಟ ಮಾಡಿ ಹೋರಾಟ ಮಾಡ್ತಿದ್ದಾರೆ ಎಂದು ಅವರು ವಿವರಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 73536 56555